ದೀದಾರ್ ಗಂಜ್ ಯಕ್ಷಿ (ಅಥವಾ ದೀದಾರ್ ಗಂಜ್ ಚಾಮರಸುಂದರಿ ಹಿಂದಿ:दीदारगंज यक्षी) ಯು ಇಂಡಿಯಾದ ಅತ್ಯಂತ ಸುಂದರವಾದ ಪ್ರಾಚೀನ ಕಲ್ಲಿನ ಪ್ರತಿಮೆಗಳಲ್ಲೊಂದು. ಈ ಪುತ್ಥಳಿಯ ಮೇಲ್ಮೈಯನ್ನು ಅತ್ಯಂತ ನುಣುಪಾಗಿ ನಯಗೊಳಿಸಿರುವುದರಿಂದ ಇದು ಕಂಡಿತಾ ಮೌರ್ಯನ್ ಶೈಲಿಯ ಕಲಾಕೃತಿ ಎಂದು ಲೆಕ್ಕಿಸಿ ಕ್ರಿಸ್ತಪೂರ್ವ ಮೂರನೇ ಶತಮಾನದ್ದು ಎನ್ನಲಾಗಿದೆ. ಆಮೇಲಿನ ಸಂಶೋಧನೆಗಳಲ್ಲಿ ಇದೇ ಶೈಲಿ, ಆಕಾರ ಮತ್ತು ಕುಸುರಿಕಲೆಯು ಆನಂತರದ ಕಾಲದ ಇನ್ನಿತರ ಶಿಲ್ಪಕಲೆಗಳಲ್ಲೂ ಕಂಡು ಬಂದಿರುವುದರಿಂದ ಈ ವಿಗ್ರಹವು ಕ್ರಿಸ್ತಶಕ ಎರಡನೇ ಶತಮಾನದ ಆಚೀಚಿನದು ಅಥವಾ ಕ್ರಿಸ್ತಶಕ ಮೊದಲನೆಯ ಶತಮಾನದ್ದು ಎಂದು ಕೂಡಾ ಅಭಿಪ್ರಾಯ ಪಡಲಾಗಿದೆ. ಹಣೆಯ ಮೇಲಿನ ಗಂಟನ್ನು ವಿಶೇಷವಾಗಿ ಕುಶಾನರ ಕಾಲದ ಶೈಲಿ ಎಂದು ತಿಳಿಯಲಾಗಿದೆ. ಸದ್ಯಕ್ಕೆ ಈ ಪ್ರತಿಮೆಯನ್ನು ಬಿಹಾರದ ರಾಜಧಾನಿ ಪಾಟ್ನಾದಲ್ಲಿನ ಬಿಹಾರ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಪಾಟ್ನಾ (ಪಾಟಲಿಪುತ್ರ) ವು ಹಿಂದಿನ ಮೌರ್ಯ ಸಾಮ್ರಾಜ್ಯದ ರಾಜಧಾನಿಯೂ ಆಗಿತ್ತು. ದೀದಾರ್ ಗಂಜ್ ಯಕ್ಷಿಯ ಪ್ರತಿಮೆಯು ಐದು ಅಡಿ ಎರಡು ಅಂಗುಲ ಎತ್ತರವಿದ್ದು ಅದನ್ನು ಸುಣ್ಣಗಲ್ಲಿನ ಒಂದು ಅಡಿ ಏಳೂವರೆ ಅಂಗುಲದ ಪೀಠದಲ್ಲಿ ಕೂರಿಸಲಾಗಿದೆ. ಪ್ರತಿಮೆಯ ಹೊರಮೈ ಎಷ್ಟು ನುಣುಪಾಗಿದೆಯೆಂದರೆ ಕನ್ನಡಿಯಂತೆ ಹೊಳೆಯುತ್ತದೆ. ಆಳೆತ್ತರದ ಈ ಪ್ರತಿಮೆಯು ಸುಂದರ ಮೈಮಾಟ ಹೊಂದಿದ್ದು ಸಾಮ್ರಾಜ್ಯ ಅಳಿದ ಮೇಲೂ ಸ್ವಲ್ಪಕಾಲ ಈ ಕಲಾಪ್ರಕಾರ ಮುಂದುವರಿದಂತೆ ತೋರುತ್ತದೆ. ಚಾಮರವು ಬಲಗೈಯಲ್ಲಿದ್ದು ಭುಜದ ಮೇಲೆ ಇಳಿಬಿದ್ದಿದೆ. ಆದರೆ ಎಡಗೈ ಮುರಿದಿದೆ. ಮೊಣಕಾಲ ಕೆಳಗಿನ ಬಟ್ಟೆಯು ಪರದೆಯಂತಿದ್ದು ಒಳಗಿನದು ಕಾಣುವಂತೆ ಇದೆ. ಆ ಕಾಲದ ಇಂಡಿಯಾದ ಶಿಲ್ಪಕಲಾಕೃತಿಗಳಲ್ಲಿ ಕಂಡುಬರುವಂತೆ ಈ ಪ್ರತಿಮೆಯೂ ಪುಟ್ಟ ದೇವಿಯಂತೆ ತೋರುತ್ತದೆ ಹೊರತು ದೊಡ್ಡ ದೇವತೆಯಂತಲ್ಲ. == ಶೈಲಿ ಮತ್ತು ಸಂದರ್ಭ == ಸಾಮಾನ್ಯವಾಗಿ ಮುಖ್ಯ ದೇವತೆಯ ಆಚೀಚೆ ಕಂಡುಬರುವ ಪ್ರಮುಖವಲ್ಲದ ಶಿಲ್ಪಗಳನ್ನು ಯಕ್ಷ ಯಕ್ಷಿಯರು ಎಂದು ಗುರುತಿಸಲಾಗುತ್ತದೆ. ಯಕ್ಷಯಕ್ಷಿಯರು ಸಮೀಪದ ಮರದಲ್ಲಿ ಅಥವಾ ನೀರಾಸರೆಯಲ್ಲಿ ನೆಲೆಗೊಂಡ ಆತ್ಮಸ್ವರೂಪಿಗಳು. ವಾಸ್ತವವಾಗಿ ಅವು ಜನಪದ ದೈವಗಳಾಗಿದ್ದು ಬೌದ್ಧ ಜೈನ ಮತ್ತು ಹಿಂದೂ ಧರ್ಮಗಳಲ್ಲಿ ದೇವಗಣದ ಅಂಗ ಎಂದು ಅಂಗೀಕರಿಸಲಾಗಿದೆ. ಇಂಡಿಯಾದಲ್ಲಿ ಸಿಕ್ಕಿರುವ ಕಲ್ಲಿನ ಅತಿ ಪುರಾತನ ಸ್ಮಾರಕ ಶಿಲ್ಪಗಳಲ್ಲಿ, ಅವು, ಅಥವಾ ಕೊನೇಪಕ್ಷ ಆಧುನಿಕ ಕಲಾ ಇತಿಹಾಸಕಾರರು ಅವೇ ಎಂಬುದಾಗಿ ಗುರುತಿಸಿರುವ ಸ್ವರೂಪಗಳು, ಮುಖ್ಯಪ್ರತಿಮೆಗಳ ಹಿಂದೆ ಸರ್ವೇಸಾಮಾನ್ಯವಾಗಿ ಕಂಡುಬರುತ್ತವೆ. ಸಾಂಚಿ ಮತ್ತು ಭರಹುತ್ ಬೌದ್ಧ ಸ್ತೂಪಗಳೆರಡೂ ಕಡೆ ಇವು ತುಂಬಾ ಇದ್ದು, ಭರಹುತ್ ನಲ್ಲಿ ಅವುಗಳ ಕೈಯಲ್ಲಿನ ಶಾಸನಗಳಲ್ಲಿ ಅವುಗಳ ಹೆಸರನ್ನೂ ಕೆತ್ತಲಾಗಿದೆ.<>, 28-31; , 97-100</> ಇಂಡಿಯಾದ ಹೆಣ್ಣುದೇವತೆಗಳಲ್ಲಿರಬೇಕಾದಂತ ಕೆಲ ಅಂಶಗಳನ್ನೂ ಈ ಯಕ್ಷಿಯರಲ್ಲಿ ಕಾಣಬಹುದು, ಅವೇನೆಂದರೆ “ಅಲಂಕಾರಿಕವಾದ ಕಿರೀಟ ಮತ್ತು ಆಭರಣಗಳು, ಗುಂಡಗಿನ ದೊಡ್ಡಗಾತ್ರದ ಮೊಲೆಗಳು, ತೆಳುವಾದ ಸೊಂಟ, ವಿಸ್ತಾರವಾದ ಕೆಳಹಿಂಬದಿ ಮತ್ತು ಹಿತವಾದ ಭಂಗಿ… ಅಥವಾ ಅಂತಹ ಸುಂದರ ಅಂಗಸೌಷ್ಟವವನ್ನು ತೋರುವ ಗೀಚುಗೆರೆಗಳು; ಅದಕ್ಕಿಂತಲೂ ಹೆಚ್ಚಾಗಿ ಜೀವಂತಿಕೆಯನ್ನು ತೋರುವ ಗುಣ.” ಮತ್ತೊಬ್ಬ ವಿದ್ವಾಂಸರ ಪ್ರಕಾರ, ಪ್ರತಿಮೆಯನ್ನು ಮಾನವದೇಹದ ಮೈಮಾಟವು ದಿಟವಾಗಿ ಅದು ಹೇಗಿದೆಯೋ ಹಾಗೆ ಕಲಾತ್ಮಕವಾಗಿ ಕಲ್ಲಿನಲ್ಲಿ ಸಾಕ್ಷಾತ್ಕರಿಸಲಾಗಿದೆ. ಮುಂಭಾಗದ ಅಂಕುಡೊಂಕುಗಳಿಗೆ ಹೋಲಿಸಿದರೆ ಹಿಂಭಾಗವು ಚಪ್ಪಟೆಯಾಗಿದ್ದು ಶಿಲ್ಪಿಯು ಈ ಕಡೆ ಅಷ್ಟೇನೂ ಆಸಕ್ತಿ ತೋರಿದಂತಿಲ್ಲ. == ಹೊಸ ಚರಿತ್ರೆ == ೧೯೧೭ ಅಕ್ಟೋಬರ್‌ ೧೮ರಂದು ಪಾಟ್ನಾ ನಗರದಲ್ಲಿ ಕದಮ್‌ ರಸುವಾಲ್‌ ಎಂಬ ಹಳ್ಳಿಯಲ್ಲಿ ಹೆಸರಾಂತ ಪ್ರಾಚ್ಯವಸ್ತು ಸಂಶೋಧಕ ಮತ್ತು ಚರಿತ್ರೆಕಾರ ಪ್ರೊಫೆಸರ್‌ ಜೆ ಎನ್‌ ಸಮದ್ದರ್‌ ಅವರು ಹಳ್ಳಿಯವರೊಂದಿಗೆ ಅಲ್ಲಿನ ಮಸೀದಿಗೆ ವಾಯುವ್ಯ ದಿಕ್ಕಿನಲ್ಲಿ ಗಂಗಾನದಿಯ ದಡದ ಬಳಿ ಉತ್ಖನನ ನಡೆಸುತ್ತಿರುವಾಗ್ಗೆ ದೀದಾರ್ ಗಂಜ್ ಯಕ್ಷಿಯ ಪ್ರತಿಮೆ ಸಿಕ್ಕಿತು. ಆಮೇಲೆ ಪಾಟ್ನಾ ಮ್ಯೂಸಿಯಂ ಸಮಿತಿಯ ನಾಯಕರೂ ಕಂದಾಯ ಮಂಡಲಿಯ ಸದಸ್ಯರೂ ಆಗಿದ್ದ ಇ ಎಚ್‌ ಸಿ ವಾಲ್ಶ್‌ ಮತ್ತು ಪ್ರಾಚ್ಯವಸ್ತು ತಜ್ಞ ಡಾ. ಡಿ ಬಿ ಸ್ಪೂನರ್‌ ಅವರ ನೆರವಿನಿಂದ ಈ ಪ್ರತಿಮೆಯನ್ನು ಪಾಟ್ನಾ ವಸ್ತುಸಂಗ್ರಹಾಲಯಕ್ಕೆ ಸಾಗಿಸಿದರು. ವಾಷಿಂಗ್ಟನ್‌, ಡಿ.ಸಿ ಯಲ್ಲಿ ಸ್ಮಿತ್ಸೋನಿಯನ್‌ ಸಂಸ್ಥೆ ಮತ್ತು ನ್ಯಾಷನಲ್‌ ಗ್ಯಾಲರಿ ಆಫ್‌ ಆರ್ಟ್‌ ಸಹಯೋಗದಲ್ಲಿ ನಡೆದ ಪ್ರದರ್ಶನದಲ್ಲಿ ಇಡಲು ಈ ಪ್ರತಿಮೆಯನ್ನು ಸಾಗಿಸುತ್ತಿರುವಾಗ ಅಕಸ್ಮಾತ್ತಾಗಿ ಇದರ ಮೂಗು ಮುರಿದುಹೋಯಿತು. ಅಂದಿನಿಂದ ಈ ಪ್ರತಿಮೆಯನ್ನು ಎಲ್ಲಿಗೂ ಸಾಗಿಸಬಾರದೆನ್ನುವ ಕಠಿಣ ತೀರ್ಮಾನ ತೆಗೆದುಕೊಳ್ಳಲಾಯಿತು. ೨೦೧೭ರಲ್ಲಿ ಈ ಪ್ರತಿಮೆಯನ್ನು ಕಂಡುಕೊಂಡ ನೂರು ವರ್ಷಗಳ ನೆನಪಿಗೆ ಪಾಟ್ನಾದ ರಂಗನಿರ್ದೇಶಕಿ ಸುನೀತಾ ಭಾರ್ತಿ ಯವರು ”ಯಕ್ಷಿಣಿ” ಎಂಬ ನಾಟಕವನ್ನು ನಿರ್ಮಿಸಿ ಪ್ರದರ್ಶಿಸಿದರು. ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಶನ್ಸ್‌ (ಐಸಿಸಿಆರ್‌) ಮತ್ತು ಇಂದಿರಾಗಾಂಧಿ ನ್ಯಾಷನಲ್‌ ಸೆಂಟರ್‌ ಫಾರ್‌ ದಿ ಆರ್ಟ್ಸ್‌ (ಐಜಿಎನ್‌ಸಿಎ) ನವದೆಹಲಿ ಇವರ ನೇತೃತ್ವದಲ್ಲಿ ಈ ನಾಟಕ ಪ್ರದರ್ಶನ ಕಂಡಿತು. == ಟಿಪ್ಪಣಿ == == == , .., , 2nd . 1994, , 0300062176 , (1977), : , 1977, , 978-0-226-53230-1 , , : , , , 1967 (3rd .), , , 0140561021 == == ಪಾಟ್ನಾ ವಸ್ತುಸಂಗ್ರಹಾಲಯದಲ್ಲಿರುವ ದೀದಾರ್ ಗಂಜ್ ಯಕ್ಷಿ ದೀದಾರ್ ಗಂಜ್ ಯಕ್ಷಿ 'ದೀದಾರ್ ಗಂಜ್ ಯಕ್ಷಿಣಿ: ಪರಿಪೂರ್ಣ ಹೆಂಗಸಿನ ತೋರುವಿಕೆ (ಹಿಂದೀ)